ಗುತ್ತಿಗೆದಾರರ ಧನ, ಮಾನ, ಪ್ರಾಣ ಸಂರಕ್ಷಣೆಗಾಗಿ
ಭ್ರಷ್ಟವಲ್ಲದ ಹಾಗು ಪಾರದರ್ಶಕ ಕಾರ್ಯನಿರ್ವಹಣೆಯನ್ನು ರಚಿಸಲು
ಪ್ರಿಯ ಗುತ್ತಿಗೆದಾರ ಬಂಧುಗಳೇ
ವ್ಯವಸಾಯ ಮಾಡುವವರನ್ನು "ರೈತ"ರು ,ಉದ್ಯೋಗ ಮಾಡುವವರನ್ನು ಉದ್ಯೋಗಸ್ಥರು , ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರನ್ನು
ವ್ಯಾಪಾರಸ್ಥರು , ನ್ಯಾಯದ ವಾದವನ್ನು ಮಾಡುವರನ್ನು ವಕೀಲರು ,ಜೀವಉಳಿಸುವವರನ್ನು ವೈದ್ಯರು ಎಂಬ ನಾಮಧೇಯದಿಂದ ಗುರುತಿಸಲಾಗುತ್ತದೆ .
ಹಾಗಾದ್ರೆ ನಮ್ಮ ಐಡೆಂಟಿಟಿ ? ನಾವು ಈ ಸಮಾಜದ ಮಕ್ಕಳು, ನಾವು ಗುತ್ತಿಗೆದಾರರು ಯಾವುದೇ ದರ್ಜೆಯವರಾದರು ,ಖಾಸಗಿ ಅಥವಾ ಸರ್ಕಾರಿ ಗುತ್ತಿಗೆದಾರರಾದರೂ
ನಾವು ಗುತ್ತಿಗೆದಾರರೇ . ನಾವು ಸಾಮಾಜಿಕ ,ಪಕ್ಷಾತೀತ , ಹಾಗೂ ಜಾತ್ಯತೀತ ವರ್ಗದವರು .ರಸ್ತೆ ,ಶಾಲೆ ,ಕಟ್ಟಡ ,ಕಚೇರಿ ಆಣೆಕಟ್ಟು ಮಂದಿರ-ಮಸೀದಿಗಳನ್ನು ಬೇಧವಿಲ್ಲದೇ ಭಾವದಿಂದಲೇ ನಿರ್ಮಿಸುವವರು . ಮೊದಲು ನಮ್ಮ ಹಣವನ್ನು ಬಂಡವಾಳವಾಗಿ ಹಾಕಿ ತದನಂತರ ಹಣವನ್ನು ಸರ್ಕಾರದಿಂದಲೋ ,ಖಾಸಗಿ ಮಾಲೀಕರಿಂದಲೋ ಧರ್ಮವಾಗಿ ಪಡೆಯುವ ವರ್ಗ ನಮ್ಮದು .ಇದು ನಮಗೆ ಬರಿ ವೃತಿಯಲ್ಲ ಆತ್ಮಗೌರವದ ಪ್ರತೀಕ ನಮ್ಮ ಹೆಮ್ಮೆ . ನಮಗೂ ಸಹ ಸಂಕಷ್ಟಗಳಿವೆ ಸಮಸ್ಯೆಗಳಿವೆ ಅದನ್ನು ಬಗೆಹರಿಸಲು ನಮ್ಮ ಕೈಗಳು
ಸದಾ ಒಗ್ಗಾಟಾಗಿರಬೇಕು
ಹನಿ ಹನಿ ಸೇರಿದ್ರೆ ಹಳ್ಳ ತೆನೆ ತೆನೆ ಸೇರಿದ್ರೆ ಬಳ್ಳ
ನಮ್ಮ ಧ್ವನಿ